ಪ್ರಕಾಶ್ ಯಾಕೆ ?

ಜನಸಾಮಾನ್ಯರು ತಮ್ಮ ಬಳಿ ಯಾವುದೇ ಸಮಸ್ಯೆ ತಂದರೂ ಅವುಗಳನ್ನು ಪರಿಹರಿಸಲು ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಅವರು ತಾವು ದತ್ತು ತೆಗೆದುಕೊಂಡ ಹಳ್ಳಿಗಳಲ್ಲಿ ಅಥವಾ ಶಾಲೆಗಳಲ್ಲಿ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಹಳ್ಳಿಗಳನ್ನು ಮತ್ತು ಶಾಲೆಗಳನ್ನು ದತ್ತು ತೆಗೆದುಕೊಂಡು, ಶಿಕ್ಷಣದ ಏಳಿಗೆಗಾಗಿ, ನೈರ್ಮಲ್ಯಕ್ಕಾಗಿ ಮತ್ತು ಸಾಮಾಜಿಕ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ಅವರು ಮಾಡಿದ ಪ್ರಯತ್ನಗಳಲ್ಲಿ ಅವರಿಗಿರುವ ಅನುಭವ ಆಳವಾದದ್ದು. ಹೀಗಾಗಿ ಜನರ ಯಾವ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬ ಬಗ್ಗೆ ಅವರಿಗೆ ಸ್ಪಷ್ಟ ತಿಳುವಳಿಕೆ, ಸ್ಪಷ್ಟ ಒಳನೋಟಗಳಿವೆ.

ಒಂದು ಕೆಳ ಮಧ್ಯಮದ ವರ್ಗದ ಕುಟುಂಬದಿಂದ ಬಂದು, ಅತ್ಯಂತ ಕಷ್ಟಪಟ್ಟು ಇಂದು ತಾನಿರುವ ಮಟ್ಟಕ್ಕೆ ಬೆಳೆದಿರುವ ಅವರು ಬದುಕಿನ ಎಲ್ಲಾ ಬಗೆಯ ಸಮಸ್ಯೆಗಳ ಆಳ ಅಗಲ ಕಂಡವರು. ಇಂದು ನಾವಿರುವ ಸಂದರ್ಭವನ್ನು ಸರಿಯಾಗಿ ಗ್ರಹಿಸಿ ಅರ್ಥಮಾಡಿಕೊಳ್ಳಬಲ್ಲ ಅವರು ಎಂದಿಗೂ ನುಡಿದಂತೆ ನಡೆಯುವವರು. ಕೊಟ್ಟ ಮಾತಿಗೆ ಎಂದೂ ತಪ್ಪದವರು. ಪಾರ್ಲಿಮೆಂಟಿಗೆ ಆಯ್ಕೆಯಾದರೆ ಜನರ ನಿಜವಾದ ಧ್ವನಿಯಾಗಿ ಕೆಲಸ ಮಾಡುವ ಬದ್ಧತೆ ಅವರಲ್ಲಿದೆ. ಯಾವುದೇ ಸಂದರ್ಭದಲ್ಲಿ ಮತ್ತೊಂದು ಪಕ್ಷಕ್ಕೆ ಹೆಚ್ಚಿನ ಒಂದು ಮತವಾಗುವ ಮಟ್ಟಕ್ಕೆ ಅವರೆಂದೂ ಸೀಮಿತವಾಗುವುದಿಲ್ಲ. ಕೇವಲ ಒಂದೆರಡು ಹಳ್ಳಿ ಅಥವಾ ಶಾಲೆಗಳ ಮಿತಿಯನ್ನು ಮೀರಿ ಸಮಾಜದ ವಿಶಾಲ ಜನವರ್ಗದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ತಾನು ಮುನ್ನಡೆಯಬೇಕಿರುವ ಅಗತ್ಯವನ್ನು ಪ್ರಕಾಶ್ ಇಂದು ಮನಗಂಡಿದ್ದಾರೆ. ವಿಶಾಲ ಜನರ ಬದುಕಿನ ಮೇಲೆ ಪ್ರಭಾವಿಸುವ ನೀತಿ ನಿರೂಪಣೆಯ ಕೆಲಸಲ್ಲಿ ಒಂದೇ ರೀತಿಯಲ್ಲಿ ನಿರಂತರವಾಗಿ ಕೆಲಸ ಮಾಡುವ ಅಗತ್ಯವನ್ನು ಅವರು ಗುರುತಿಸಿದ್ದಾರೆ.

ರಾಜಕಾರಣಕ್ಕೆ ಅವರ ಪ್ರವೇಶವೇನೂ ದಿಢೀರ್ ಎಂದು ಆಗಿದ್ದಲ್ಲ. ಯಾವುದು ಸರಿ, ಯಾವುದು ಸರಿಯಲ್ಲ ಎಂದು ಗುರುತಿಸಿ, ಸರಿಯಾದದ್ದರ ಪರವಾಗಿ ನಿಂತು, ತಾನು ನಂಬಿರುವ ಮೌಲ್ಯ ಆದರ್ಶಗಳ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳದೇ ಬಂದ ಅವರ ವ್ಯಕ್ತಿತ್ವವೇ ಅವರನ್ನು ಇಂದು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದೆ. ಇದು ಬಹಳ ಹಿಂದೆಯೇ ಯೋಜಿಸಿ ಇಟ್ಟ ಹೆಜ್ಜೆಯಲ್ಲದಿದ್ದರೂ ಬದಲಾವಣೆ ತರುವ ಪ್ರಯತ್ನದಲ್ಲಿ ಇದೊಂದು ಸಹಜ ನಡೆಯಾಗಿದೆ. ಒಮ್ಮೆ ಅವರು ಸಂಸದರಾಗಿ ಜನರಿಂದ ಆರಿಸಿ ಬಂದಲ್ಲಿ ಜನರಿಗಾಗಿ ಹೇಗೆ ಕೆಲಸ ಮಾಡಬೇಕೆಂಬ ವಿಷಯದಲ್ಲಿ ಪ್ರಕಾಶ್ ರಾಜ್ ಮಾದರಿಯಾಗಿ ನಿಲ್ಲುವುದರಲ್ಲಿ ಅನುಮಾನವಿಲ್ಲ. ಪ್ರಕಾಶ್ ರಾಜ್ ಹೊಂದಿರುವ ಪ್ರಜಾತಾಂತ್ರಿಕ ದೃಷ್ಟಿಕೋನವೇ ನಾವವರನ್ನು ಪಾರ್ಲಿಮೆಂಟಿಗೆ ಯಾಕೆ ಕಳಿಸಬೇಕು ಎಂಬುದನ್ನು ಹೇಳುತ್ತದೆ. ಹಾಗೆಯೇ ನೀತಿ ನಿರೂಪಣೆಯ ಮಟ್ಟದಲ್ಲಿ ಜನರ ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಬದಲಾವಣೆ ತರುವ ವ್ಯಕ್ತಿಯೂ ಅವರೇ ಎಂಬುದನ್ನು ಸಹ ಅವರ ಈ ದೃಷ್ಟಿಕೋನ ಹೇಳುತ್ತದೆ.

ಬೆಂಗಳೂರು ಕೇಂದ್ರ ಯಾಕೆ ?

ನಮ್ಮಲ್ಲಿರುವ ಹಲವರಂತೆ ಪ್ರಕಾಶ್ ರಾಜ್’ರವರು ಕೂಡ ಈ ಬೀದಿಗಳಲ್ಲೇ ಹುಟ್ಟಿ ಬೆಳೆದದ್ದು. ಆಗಿನಿಂದ ಅವರು ಹಲವು ಚಿತ್ರೋದ್ಯಮಗಳಲ್ಲಿ ನಟಿಸಿ ಬೇರೆ ಬೇರೆ ಸ್ಥಳಗಳಲ್ಲಿ ಪಯಣಿಸಿ ವಾಸಿಸಿದ್ದಾರೆ. ಈ ಎಲ್ಲವೂ ಅವರನ್ನು ಅವರ ಪ್ರಾರಂಭದ ವರ್ಷಗಳ ಅವಿಭಾಜ್ಯ ಭಾಗವಾದ, ಇಲ್ಲಿಗೆ ಮರಳಿಸಿದೆ. ಕೇವಲ ಈ ಪ್ರದೇಶದಲ್ಲಿ ಶಾಲೆಗೆ ಹೋಗುವುದು ಮಾತ್ರವಲ್ಲ, ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ತಮ್ಮ ವೃತ್ತಿ ಜೀವನವನ್ನು ಇಲ್ಲಿಯೇ ಪ್ರಾರಂಭಿಸಿದರು. ಅವರು ಈ ಪ್ರದೇಶವು ಪ್ರೀತಿಪೂರಿತ ಹಾಗೂ ಮಾನವೀಯ ಪ್ರದೇಶದಿಂದ ಅಸಹಿಷ್ಣುತೆ ಮತ್ತು ಪ್ರತ್ಯೇಕತಾವಾದದ ಪ್ರದೇಶವಾಗಿ ಮಾರ್ಪಾಡಾಗುವುದನ್ನು ನೋಡಿದ್ದಾರೆ. ಈ ಪ್ರದೇಶ ಮೂಲಸೌಕರ್ಯ ಮತ್ತು ಇತರ ವಿಷಯಗಳಲ್ಲಿ ಸಕಾರಾತ್ಮಕವಾಗಿ ಅಭಿವೃದ್ದಿ ಹೊಂದಿದ್ದರೂ, ಇದು ಕೆಲವು ಗೊಂದಲದ ನಕಾರಾತ್ಮಕ ಬೆಳವಣಿಗೆಗಳನ್ನು ಕೂಡ ಕಂಡಿದೆ ಹಾಗೂ ಪ್ರಕಾಶ್’ರವರು ಇವುಗಳನ್ನು ಪರಿಹರಿಸಲು ಬಯಸುತ್ತಾರೆ. ಅವರು ತಾವು ಬೆಳೆದ ಸಮುದಾಯದಿಂದ ಪಡೆದಷ್ಟನ್ನು ಅದಕ್ಕೆ ಹಿಂತಿರುಗಿಸಬೇಕೆಂದಿದ್ದಾರೆ.

ಪಾರ್ಲಿಮೆಂಟನ್ನು ಮುಂದಿನ ಹಂತಕ್ಕೆ ಕೊಂಡೊಯ್ಯೋಣ

#ಚಲೋ_ಪಾರ್ಲಿಮೆಂಟ್

ನನಗೆ ಬರೆದು ತಿಳಿಸಿ

ನಾನು ಸಂಸತ್ತಿನಲ್ಲಿ ಏನು ಕೇಳಬೇಕೆಂದು ನೀವು ಹೇಳಿ

ಮೀಡಿಯಾ